ರಮಿ ಸಲಹೆಗಳು ಮತ್ತು ತಂತ್ರಗಳು
ರಮ್ಮಿ ಆಟ ಗೆಲ್ಲಲು ಸಲಹೆ ಮತ್ತು ತಂತ್ರ
ನಗದು ಗೆಲ್ಲಲು ಯಾರು ಇಷ್ಟಪಡುವುದಿಲ್ಲ? ನಾವೆಲ್ಲರೂ ಇಷ್ಟಪಡುತ್ತೇವೆ. ಹೌದು, ಆನ್200cಲೈನ್ ರಮಿ ಆಟಗಳನ್ನು ಆಡುವ ಮೂಲಕ ನೀವು ನಿಜವಾದ ಹಣವನ್ನು ಗೆಲ್ಲಬಹುದು. ರಮಿ ಭಾರತದಲ್ಲಿ ಬಹಳಷ್ಟು ಜನಪ್ರಿಯವಾಗಿದೆ. ಅದರ ಸರಳತೆ ಮತ್ತು ಅನಿಯಮಿತ ಮೋಜಿನ ಅಂಶಕ್ಕಾಗಿ ಅದನ್ನು ಲಕ್ಷಾಂತರ ಜನರು ಇಷ್ಟಪಡುತ್ತಾರೆ.
ಈ ಆಟವನ್ನು 2 ರಿಂದ 6 ಆಟಗಾರರು ಒಂದು ಅಥವಾ ಎರಡು ಸ್ಟ್ಯಾಂಡರ್ಡ್ ಡೆಕ್200cಗಳನ್ನು ಬಳಸಿಕೊಂಡು ಆಡುತ್ತಾರೆ. ನಿಮ್ಮ ಎಲ್ಲಾ 13 ಕಾರ್ಡ್200cಗಳನ್ನು ಅನುಕ್ರಮಗಳಲ್ಲಿ, ಅಥವಾ ಅನುಕ್ರಮಗಳು ಮತ್ತು ಸೆಟ್200cಗಳಲ್ಲಿ ಜೋಡಿಸುವುದು ಇದರ ಉದ್ದೇಶ. ರಮಿ ಒಂದು ಕೌಶಲ್ಯದ ಆಟವಾಗಿದ್ದು, ಆಟದ ಬಗ್ಗೆ ಮೂಲಭೂತ ತಿಳುವಳಿಕೆ ಮತ್ತು ಗೆಲ್ಲಲು ಸಾಕಷ್ಟು ಅಭ್ಯಾಸದ ಅಗತ್ಯವಿದೆ.
ನೀವು ರಮಿ ಚಾಂಪಿಯನ್ ಆಗಬೇಕೆಂದು ಬಯಸಿದರೆ, ನಿಮ್ಮ ಆಟವನ್ನು ಕ್ಷಿಪ್ರಗೊಳಿಸಲು ನೀವು ಈ ಕೆಳಗಿನ ತಂತ್ರಗಳನ್ನು ಬಳಸಬಹುದು.
ರಮಿ ಆಟದಲ್ಲಿ ಗೆಲ್ಲಲು ಸಲಹೆಗಳು ಮತ್ತು ತಂತ್ರಗಳು
-
ನಿಮ್ಮ ಕಾರ್ಡ್200cಗಳನ್ನು ವಿಂಗಡಿಸಿ
ರಮಿ ನಿಯಮಗಳ ಪ್ರಕಾರ, ಗೆಲ್ಲಲು ಕನಿಷ್ಠ ಎರಡು ಅನುಕ್ರಮಗಳು ಬೇಕಾಗುತ್ತವೆ. ಆದ್ದರಿಂದ ಕಾರ್ಡ್200cಗಳನ್ನು ಹಂಚಿದ ತಕ್ಷಣ ನಿಮ್ಮ ಕೈಯಲ್ಲಿರುವ ಕಾರ್ಡ್200cಗಳನ್ನು ವಿಂಗಡಿಸಿ, ಅದರಿಂದ ನೀವು ಅನುಕ್ರಮಗಳನ್ನು ರಚಿಸುವತ್ತ ಗಮನ ಹರಿಸಬಹುದು.
Junglee Rummy ಯಲ್ಲಿ, ಆಟದ ಪ್ರಾರಂಭದಲ್ಲಿ “ವಿಂಗಡಿಸಿ” ಬಟನ್ ಬಳಸುವ ಮೂಲಕ ನಿಮ್ಮ ಕೈಯಲ್ಲಿರುವ ಕಾರ್ಡ್200cಗಳನ್ನು ಸ್ವಯಂಚಾಲಿತವಾಗಿ ಜೋಡಿಸಬಹುದು. ಕಾರ್ಡ್200cಗಳನ್ನು ಅವುಗಳ ಸೂಟ್200cಗಳು ಮತ್ತು ಬಣ್ಣಗಳ ಆಧಾರದ ಮೇಲೆ ಜೋಡಿಸಲಾಗುತ್ತದೆ.
-
ಶುದ್ಧ ಅನುಕ್ರಮವನ್ನು ರಚಿಸಲು ಆದ್ಯತೆ ನೀಡಿ
ಮಾನ್ಯ ಘೋಷಣೆಗೆ ಶುದ್ಧ ಅನುಕ್ರಮವು ಅವಶ್ಯಕವಾಗಿದೆ. ಶುದ್ಧ ಅನುಕ್ರಮವನ್ನು ರಚಿಸಲು ನೀವು ಆದ್ಯತೆ ನೀಡಬೇಕು. ಶುದ್ಧ ಅನುಕ್ರಮವು ಒಂದೇ ಸೂಟ್200cನ ಮೂರು ಅಥವಾ ಹೆಚ್ಚಿನ ಕ್ರಮಾನುಗತ ಕಾರ್ಡ್200cಗಳನ್ನು ಹೊಂದಿರುತ್ತದೆ. ಶುದ್ಧ ಅನುಕ್ರಮವನ್ನು ರಚಿಸುವುದು ನಿಮ್ಮ ಸ್ಕೋರ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉದಾಹರಣೆಗಳು: 5♣-6♣-7♣. 10♥-J♥-Q♥-K♥.
ಶುದ್ಧ ಅನುಕ್ರಮವನ್ನು ರಚಿಸಿದ ನಂತರ, ನೀವು ಅಶುದ್ಧ ಅನುಕ್ರಮಗಳು ಮತ್ತು ಸೆಟ್200cಗಳಂತಹ ಇತರ ಸಂಯೋಜನೆಗಳನ್ನು ರಚಿಸಬಹುದು.
-
ಜೋಕರ್200cಗೆ ಹತ್ತಿರದಲ್ಲಿ ಕಾರ್ಡ್200cಗಳನ್ನು ತ್ಯಜಿಸಿ
ಜೋಕರ್ ಅನ್ನು ಅನುಕ್ರಮ ಅಥವಾ ಸೆಟ್200cನಲ್ಲಿ ಕಾಣೆಯಾದ ಯಾವುದೇ ಕಾರ್ಡ್200cಗೆ ಬದಲಿಯಾಗಿ ಬಳಸಲಾಗುತ್ತದೆ. ವೈಲ್ಡ್ ಜೋಕರ್ ಅನ್ನು ಶುದ್ಧ ಅನುಕ್ರಮದಲ್ಲಿ ಬಳಸುವುದನ್ನು ಅನೇಕ ಆಟಗಾರರು ಇಷ್ಟಪಡುವುದಿಲ್ಲ.
5♠ ವೈಲ್ಡ್ ಜೋಕರ್ ಎಂದು ಭಾವಿಸೋಣ. ನೀವು 3♠, 4♠, 6♠ ಮತ್ತು 7♠ಕಾರ್ಡ್200cಗಳನ್ನು ತ್ಯಜಿಸಬಹುದು. ನಿಮ್ಮ ಎದುರಾಳಿಯು ಶುದ್ಧ ಅನುಕ್ರಮವನ್ನು ರಚಿಸಲು ಜೋಕರ್ ಅನ್ನು ವ್ಯರ್ಥ ಮಾಡುವುದಿಲ್ಲ ಎಂಬುದು ಸ್ವಾಭಾವಿಕ. ಆದ್ದರಿಂದ ಅವರು ನೀವು ತ್ಯಜಿಸಿದ ಯಾವುದೇ ಕಾರ್ಡ್ ಅನ್ನು ಆಯ್ಕೆ ಮಾಡದಿರುವ ಹೆಚ್ಚಿನ ಅವಕಾಶಗಳಿರುತ್ತವೆ.
-
ಹೆಚ್ಚಿನ ಮೌಲ್ಯದ ಕಾರ್ಡ್200cಗಳನ್ನು ಆಮಿಷವಾಗಿ ಬಳಸಿ
ಹೆಚ್ಚಿನ ರಮಿ ಆಟಗಾರರು ಹೆಚ್ಚಿನ ಮೌಲ್ಯದ ಕಾರ್ಡ್200cಗಳನ್ನು ಆಟದ ಪ್ರಾರಂಭದಲ್ಲಿ ತ್ಯಜಿಸುತ್ತಾರೆ. ಇದು ಸಾಮಾನ್ಯ ತಂತ್ರ, ಆದರೆ ನಿಮ್ಮ ಎದುರಾಳಿಗಳನ್ನು ಏಮಾರಿಸಲು ನೀವು ಅಂತಹ ಕಾರ್ಡ್200cಗಳನ್ನು ಬಳಸಬಹುದು. ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುವ ಉದಾಹರಣೆ ಇಲ್ಲಿದೆ.
ನೀವು Q♥ ಅನ್ನು ತ್ಯಜಿಸಿದ್ದೀರಿ ಮತ್ತು ನಿಮ್ಮ ಎದುರಾಳಿಗಳಲ್ಲಿ ಒಬ್ಬರು ಆ ಕಾರ್ಡ್ ಅನ್ನು ಎತ್ತಿಕೊಳ್ಳುತ್ತಾರೆ ಎಂದು ಭಾವಿಸೋಣ. ಆಟಗಾರನು Q♥ಅನ್ನು ಬಳಸಿಕೊಂಡು ಅನುಕ್ರಮ ಅಥವಾ ಸೆಟ್ ಅನ್ನು ರಚಿಸುತ್ತಿದ್ದಾನೆ ಎಂದು ನೀವು ಸುಲಭವಾಗಿ ಊಹಿಸಬಹುದು. ಆದ್ದರಿಂದ ನೀವು 10♥, K♥, ಮತ್ತು J♥ನಂತಹ ಯಾವುದೇ ಜೋಡಿಯಾಗುವ ಕಾರ್ಡ್200cಗಳನ್ನು ತ್ಯಜಿಸಬೇಡಿ. ನೀವು ಹಾಗೆ ಮಾಡಿದರೆ, ನಿಮ್ಮ ಎದುರಾಳಿಗೆ ಅವರು ರೂಪಿಸಲು ಪ್ರಯತ್ನಿಸುತ್ತಿರುವ ಅನುಕ್ರಮ/ಸೆಟ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.
-
ಮಿಡಲ್ ಕಾರ್ಡ್200cಗಳನ್ನು ಬಳಸಿ
4s, 5s, 6s, ಮತ್ತು 7s ನಂತಹ ಮಿಡಲ್ ಕಾರ್ಡ್200cಗಳು ತುಂಬಾ ಸುಲಭವಾಗಿ ಸಿಗುತ್ತವೆ ಮತ್ತು ಅವುಗಳನ್ನು ಅನುಕ್ರಮ ಮತ್ತು ಸೆಟ್200cಗಳಲ್ಲಿ ಸುಲಭವಾಗಿ ಜೋಡಿಸಬಹುದು. ಈ ಕಾರ್ಡ್200cಗಳು ಕಡಿಮೆ ಮೌಲ್ಯದ ಮತ್ತು ಹೆಚ್ಚಿನ ಮೌಲ್ಯದ ಕಾರ್ಡ್200cಗಳಿಗಿಂತ ಹೆಚ್ಚು ಉಪಯುಕ್ತವಾಗಿರುತ್ತವೆ.
ಉದಾಹರಣೆಗೆ, 5♦ ಅನ್ನು 3♦, 4♦, 6♦ ಮತ್ತು 7♦ರೊಂದಿಗೆ ಜೋಡಿಯಾಗಿ ರಚಿಸಲು. ಮತ್ತೊಂದೆಡೆ, 2♦ ಅನ್ನು A♦, 3♦ ಮತ್ತು 4♦ ರೊಂದಿಗೆ ಮೆಲ್ಡ್ ಮಾಡಲು ಮಾತ್ರ ಬಳಸಬಹುದು.
-
ಜೋಕರ್200cಗಳನ್ನು ಚಾತುರ್ಯದಿಂದ ಬಳಸಿ
ಜೋಕರ್ ಇಂಡಿಯನ್ ರಮಿಯಲ್ಲಿ ಆಟ ಬದಲಾಯಿಸುವ ಕಾರ್ಡ್ ಆಗಿದೆ. ಈ ಟ್ರಂಪ್ ಕಾರ್ಡ್ ಅನ್ನು ಚಾತುರ್ಯದಿಂದ ಬಳಸುವ ಮೂಲಕ ನೀವು ದೊಡ್ಡ ಲಾಭಗಳನ್ನು ಪಡೆಯಬಹುದು. ನೀವು ಈಗಾಗಲೇ ಶುದ್ಧ ಅನುಕ್ರಮವನ್ನು ರಚಿಸಿದ್ದರೆ, ಅಶುದ್ಧ ಅನುಕ್ರಮಗಳು ಅಥವಾ ಸೆಟ್200cಗಳನ್ನು ರೂಪಿಸಲು ಜೋಕರ್200cಗಳನ್ನು ಬಳಸಿ. ವೈಲ್ಡ್ ಜೋಕರ್200cಗಳನ್ನು ಶುದ್ಧ ಅನುಕ್ರಮದಲ್ಲಿ ವ್ಯರ್ಥ ಮಾಡಬೇಡಿ.
-
ನಿಮ್ಮ ಎದುರಾಳಿಗಳ ಚಲನೆಗಳನ್ನು ಗಮನಿಸಿ
ರಮಿ ಆಟವನ್ನು ಗೆಲ್ಲುವ ಪ್ರಮುಖ ತಂತ್ರವೆಂದರೆ ನಿಮ್ಮ ಎದುರಾಳಿಗಳ ಚಲನೆಗಳನ್ನು ಗಮನಿಸುವುದು. ತ್ಯಜಿಸುವ ರಾಶಿಯಿಂದ ಅವರು ಆರಿಸಿದ ಕಾರ್ಡ್200cಗಳ ಬಗ್ಗೆ ಗಮನವಿರಿಸಿ. ತ್ಯಜಿಸುವ ರಾಶಿಯಿಂದ ಆಟಗಾರನು 6♠ ಅನ್ನು ಆರಿಸುತ್ತಾನೆ ಎಂದು ಭಾವಿಸೋಣ 5♠, 7♠, 8♠ ಅಥವಾ ಇನ್ನೊಂದು ಸೂಟ್200cನಿಂದ ಯಾವುದೇ 6 ರಂತಹ ಯಾವುದೇ ಜೋಡಿಯಾಗುವ ಕಾರ್ಡ್200cಗಳನ್ನು ತ್ಯಜಿಸಬೇಡಿ. ಈ ರೀತಿಯಾಗಿ, ನಿಮ್ಮ ಪ್ರತಿಸ್ಪರ್ಧಿಗಳು ಪಂದ್ಯವನ್ನು ಗೆಲ್ಲುವುದನ್ನು ನೀವು ತಡೆಯಬಹುದು.
ಮತ್ತೊಂದೆಡೆ, ನೀವು ಅವರ ಚಲನೆಯನ್ನು ನಿರ್ಲಕ್ಷಿಸಿದರೆ, ಆಟವನ್ನು ಘೋಷಿಸಲು ಮತ್ತು ಗೆಲ್ಲಲು ನೀವು ಅವರಿಗೆ ಸಹಾಯ ಮಾಡಬಹುದು.
-
ಸಂಭವನೀಯತೆಗಳನ್ನು ಲೆಕ್ಕಹಾಕಿ
ನೀವು ರಮಿ ಆಡುವಾಗ, ನೀವು ಬಯಸಿದ ಕಾರ್ಡ್200cಗಳನ್ನು ಪಡೆಯುವ ಸಂಭವನೀಯತೆಯನ್ನು ಲೆಕ್ಕ ಹಾಕಬೇಕು. ಉದಾಹರಣೆಗೆ, ಆಟವನ್ನು ಮುಗಿಸಲು ನಿಮಗೆ ಜೋಕರ್ ಅಗತ್ಯವಿದ್ದರೆ, ಮುಚ್ಚಿದ ಡೆಕ್200cನಲ್ಲಿ ಉಳಿದಿರುವ ಜೋಕರ್200cಗಳ ಸಂಖ್ಯೆಯನ್ನು ನೀವು ಲೆಕ್ಕ ಹಾಕಬೇಕು. ಸಂಭವನೀಯತೆ ತುಂಬಾ ಕಡಿಮೆಯಿದ್ದರೆ, ನೀವು ಹೊಸ ತಂತ್ರವನ್ನು ಬಳಸುವ ಬಗ್ಗೆ ಯೋಚಿಸಬೇಕು.
ಅಂತೆಯೇ, ನೀವು ಕಪ್ಪು ಮತ್ತು ಕೆಂಪು ಕಾರ್ಡ್200cಗಳ ಬಣ್ಣಗಳನ್ನು ಸಹ ಲೆಕ್ಕ ಹಾಕಬಹುದು ಮತ್ತು ಪ್ರತಿ ಸೂಟ್200cನಲ್ಲಿ ಉಳಿದಿರುವ ಕಾರ್ಡ್200cಗಳ ಸಂಖ್ಯೆಯನ್ನು ಕಂಡುಹಿಡಿಯಬಹುದು. ಜೋಡಿಯಾಗುವ ಕಾರ್ಡ್200cಗಳು ಮತ್ತು ಹೆಚ್ಚಿನ ಮೌಲ್ಯದ ಕಾರ್ಡ್200cಗಳ ಸಂಖ್ಯೆಯನ್ನು ಕಂಡುಹಿಡಿಯಲು ಇದು ಉಪಯುಕ್ತವಾಗಿರುತ್ತದೆ
ಹೀಗಾಗಿ, ರಮಿಯಲ್ಲಿ ಸಂಭವನೀಯತೆಗಳನ್ನು ಲೆಕ್ಕಹಾಕುವುದು ನಿಮ್ಮ ವಿರೋಧಿಗಳ ಚಲನೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
-
ತಂತ್ರಗಳನ್ನು ಸುಧಾರಿಸಿ
ಕೆಲವೊಮ್ಮೆ ರಮಿ ತುಂಬಾ ಸವಾಲಿನ ಮತ್ತು ನಿರೀಕ್ಷಿಸಲಾಗದ ಆಟವಾಗಬಹುದು. ಆದ್ದರಿಂದ ಪಂದ್ಯವನ್ನು ಗೆಲ್ಲಲು ನೀವು ಪೆಟ್ಟಿಗೆಯಿಂದ ಯೋಚಿಸಬೇಕು. ಅದಕ್ಕಾಗಿ, ನೀವು ಅಸ್ತಿತ್ವದಲ್ಲಿರುವ ತಂತ್ರಗಳನ್ನು ತಿರುಚಬೇಕು. ಅನೇಕ ಪರಿಣಿತ ಆಟಗಾರರು ಬಳಸುವ ಅಂತಹ ಒಂದು ತಂತ್ರವೆಂದರೆ ತಂತ್ರಗಳನ್ನು ಹಿಂದುಮುಂದು ಮಾಡುವುದು. ಉದಾಹರಣೆಗೆ, ಹೆಚ್ಚಿನ ಆಟಗಾರರು ಹೆಚ್ಚಿನ ಮೌಲ್ಯದ ಕಾರ್ಡ್200cಗಳನ್ನು ಮೊದಲೇ ತ್ಯಜಿಸುತ್ತಾರೆ. ಆದರೆ ಕೆಲವೊಮ್ಮೆ ನಿಮ್ಮ ಹೆಚ್ಚಿನ ಮೌಲ್ಯದ ಕಾರ್ಡ್200cಗಳನ್ನು ಉಳಿಸಿಕೊಂಡು, ನಿಮ್ಮ ಎದುರಾಳಿಗಳು ತ್ಯಜಿಸಿದ ಹೆಚ್ಚಿನ ಮೌಲ್ಯದ ಕಾರ್ಡ್200cಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಅನುಕ್ರಮಗಳನ್ನು ರಚಿಸಬಹುದು.
ಸಂಕ್ಷಿಪ್ತವಾಗಿ ಹೇಳುವುದಾದರೆ, ರಮಿ ಒಂದು ಕೌಶಲ್ಯ ಆಟವಾಗಿದ್ದು, ಅದನ್ನು ಸಾಕಷ್ಟು ಅಭ್ಯಾಸದಿಂದ ಮಾತ್ರ ಕರಗತ ಮಾಡಿಕೊಳ್ಳಬಹುದು. ಮೇಲಿನವುಗಳನ್ನು ಒಳಗೊಂಡಂತೆ ನೀವು ಸ್ಮಾರ್ಟ್ ಟ್ರಿಕ್ಸ್ ಮತ್ತು ತಂತ್ರಗಳನ್ನು ಅಭ್ಯಾಸ ಮಾಡಿದರೆ ಮತ್ತು ಬಳಸಿದರೆ, ಅಂತಿಮ ರಮಿ ಚಾಂಪಿಯನ್ ಆಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ.
ನೀವು ಎಲ್ಲಾ ಸುಳಿವುಗಳು ಮತ್ತು ತಂತ್ರಗಳನ್ನು ಕಲಿತಿರಬೇಕು, ಆಗ ನೀವು ಆಟವನ್ನು ಆಡಲು ಉತ್ಸುಕರಾಗಿರುತ್ತೀರಿ. ನೀವು ಆನ್200cಲೈನ್ ರಮಿ ಆಡಲು ಬಯಸಿದರೆ, ನೀವು ಖಂಡಿತವಾಗಿಯೂ Junglee Rummy ಯನ್ನು ಪ್ರಯತ್ನಿಸಬೇಕು. ನಿಮ್ಮ ಬೆರಳ ತುದಿಯಲ್ಲಿ ನಾವು ವಿವಿಧ ರೀತಿಯ ರಮಿ ಆಟಗಳನ್ನು ನೀಡುತ್ತೇವೆ. ಅಲ್ಲದೆ, ನಮ್ಮ ಎಲ್ಲಾ ಬಳಕೆದಾರರಿಗೆ ನಾವು ಸುರಕ್ಷಿತ ಗೇಮಿಂಗ್ ವಾತಾವರಣವನ್ನು ಒದಗಿಸುತ್ತೇವೆ. ನಿಮ್ಮ ಆದ್ಯತೆಯ ಸಾಧನದಲ್ಲಿ ರಮಿ ಅಪ್ಲಿಕೇಶನ್ ಡೌನ್200cಲೋಡ್ ಮಾಡಿ ಹಾಗೂ ಅನಿಯಮಿತ ವಿನೋದ ಮತ್ತು ಮನರಂಜನೆಯ ಜಗತ್ತನ್ನು ಪ್ರವೇಶಿಸಿ.
ನಮ್ಮನ್ನು ಸಂಪರ್ಕಿಸಿ
ನೀವು ನಮಗಾಗಿ ಯಾವುದೇ ಮರುಮಾಹಿತಿಯನ್ನು ಹೊಂದಿದ್ದೀರಾ? ನಮ್ಮ ಅಪ್ಲಿಕೇಶನ್200cನ “ಸಹಾಯ” ವಿಭಾಗದಲ್ಲಿನ “ನಮ್ಮನ್ನು ಸಂಪರ್ಕಿಸಿ” ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಯಾವಾಗ ಬೇಕಾದರೂ ನಮ್ಮನ್ನು ಸಂಪರ್ಕಿಸಬಹುದು. ನೀವು ಹೊಂದಿರುವ ಯಾವುದೇ ಸಮಸ್ಯೆಗಳನ್ನು ನಮ್ಮ ಗ್ರಾಹಕ ಬೆಂಬಲ ಪ್ರತಿನಿಧಿಗಳು 24 ಗಂಟೆಗಳೊಳಗೆ ಪರಿಹರಿಸಲು ಪ್ರಯತ್ನಿಸುತ್ತಾರೆ.
ಮೇಲೆ ತಿಳಿಸಿದ ರಮಿ ಸಲಹೆಗಳನ್ನು ಇಷ್ಟಪಟ್ಟಿದ್ದೀರಾ? 2021 ರ ಪ್ರಮುಖ 10 ಆನ್200cಲೈನ್ ಆಟಗಳ ಕುರಿತ ನಮ್ಮ ಲೇಖನವನ್ನು ಸಹ ಓದಿ